ನಿರ್ಧಾರ

ಈ ಅಂಧನ ಕಣ್ಣಲ್ಲಿ ಬೆಳದಿಂಗಳ
ಬೆಳಕು ಅಮವಾಸ್ಸೆಗೆ ಬಂದು
ಮನವೆಂಬ ಚಂಚಲೆಯ
ಮಸಣದ ಕೋಣೆಯಲ್ ಕೂಡಿಟ್ಟಿದೆ.....

ಮದದಾನೆಯು ಮರು ಮಾತಾಡದೆ

ಮೌನದ ಪ್ರಶ್ನೆಗಳಿಗೆ ಮೌನದಿಂ ಉತ್ತರಿಸಿ,
ಹಯದಂತೆ ಓಡಿತು; ಗುರಿಯ ಬೆನ್ನೇರಿ
ತಾನು ಯಾರೆಂದು ತಾನೇ ಮರೆತು....

ಮಲಗಿದ್ದವನು ಎದ್ದುನಿಂತೆ
ಎದ್ದೇಳಿ ನೋಡಲು ಜೀವನ ಹುಚ್ಚರಸಂತೆ,
ನಿಲ್ಲಲೊಲ್ಲೆಯೆಂದು ಓಡಿದೆ ಓಡಿದೆ ಓಡಿದೆ
ಓಡುವುದು ಯಾಕೆಂಬುದನರಿಯದೆ.....


ಅಯ್ಯೋ ಅನಲು "ಆರವರಯ್ಯ" ?
ಎಂಬ ಸಾಂತ್ವನವು ಸಿಗದಿರಲು,
ಸ್ವಾತಂತ್ರದಿಂ ಮೆರೆದು ಜ್ಞಾನವಾಳಿದ ನಿರ್ಧಾರಕ್ಕೆ
ಕಣ್ಣಿರಲು ಅಂಧನಾದೆನಾ ಎಂಬ ಪ್ರಶ್ನೆ...!

ನೆಡೆದು ಬಂದ ದಾರಿಯ ತುಂಬ
ಹೇಗೆ ನೆಡೆವುದೆಂಬ ಚಿಂತೆ;
ಅರಿತ ಅನುಭವದ ಬಿಂಬ
ಬೇಕೆನ್ನುವುದು ಹಳೇ ಜೀವನ ಮತ್ತೆ.... -- Vikram B K

P.S. ನಿರ್ಧಾರ...ಜೀವನದ ಪ್ರಮುಖ ಹೆಜ್ಜೆ ಅಂದ್ರೆ ತಪ್ಪಲ್ಲ ಅನಿಸುತ್ತೆ... ಏನಂತೀರ...?

4 comments:

vinayraj said...

nice one bk....deep thoughts that reflect on lot of things!

vikrambk said...

Thanks Raj... :)

Anamika said...

ಮಲಗಿದ್ದವನು ಎದ್ದುನಿಂತೆ

ಎದ್ದೇಳಿ ನೋಡಲು ಜೀವನ ಹುಚ್ಚರಸಂತೆ,

ನಿಲ್ಲಲೊಲ್ಲೆಯೆಂದು ಓಡಿದೆ ಓಡಿದೆ ಓಡಿದೆ

ಓಡುವುದು ಯಾಕೆಂಬುದನರಿಯದೆ.....
best part of the poem
enjoyed it lot

vikrambk said...

@Vikas.. M very happy that you enjoyed it.. thanks fot ur comment.

Post a Comment