'ದ್ವಂದ್ವ '
Posted by
vikrambk
on Sunday, August 29, 2010
Labels: Bhaava
'ದ್ವಂದ್ವ '
ಬರೆಯಲೆಂದು ಕೂತರೇನು,
ಭಾವ ಚಿಮ್ಮಿ ಹರಿವುದೇ ?
ಭಾವ ಚಿಮ್ಮಿ ಹರಿಯುವಾಗ ,
ಪದಗಳೇಕೆ ಮರೆಯುವೆ ?
ಮನಸು ಮುರಿದು ಮೌನ ಅವಿತು
ಹೃದಯ ಬಡಿತದಿಂ ಬೆವೆತು ,
ನಿಲ್ಲಲೋಲ್ಲೆಯೆಂದು ಕೂತು ಮತ್ತೆ ನಿಂತು ಮತ್ತೆ ಕೂತು
ಅಂತರಂಗದಳಲಿಗೆ ಸೋತೆ ನಾ ಸೋತು .
ಹೇಳಬೇಕೆಂಬುದೆನ್ ಹೇಳದೆ ,
ಅಳಿದು ಹೋಗದ ಭಾವಕೆ ಬಾಗಿ
ಮರೆವು ಎಂಬುದ ಮರೆತು ಯೋಚಿಸುವೆ
ನಾ ಕೆಡಲು ನಾನಾಗಿ ....
ಆಗ ತಪ್ಪು ಈಗದು ಸರಿ
ಮನದಂಗಳದಲಿ ಈ ಯೋಚನೆ ಬರಿ ...
ಇದೆಲ್ಲಾ ಬೇಡ ; 'ಏಕೆ ಹೀಗೆ ನಾನು '?
'ನಾನು ' ಎನಲು ಅರ್ಥವೇನು ?
ಅಯ್ಯೋ ಮತ್ತವೇ ಯೋಚನೆ ಬರಿ ... --Vikram B K
P.S. ಭಾವನೆಗಳು ನೂರಾರು.. ಪ್ರತಿಯೊಬ್ಬನ ಜೀವನದಲ್ಲಿ ದ್ವಂದ್ವ ಕಾಡುತ್ತದೆ, ನನ್ನ ದ್ವಂದ್ವವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ....
ಬರೆಯಲೆಂದು ಕೂತರೇನು,
ಭಾವ ಚಿಮ್ಮಿ ಹರಿವುದೇ ?
ಭಾವ ಚಿಮ್ಮಿ ಹರಿಯುವಾಗ ,
ಪದಗಳೇಕೆ ಮರೆಯುವೆ ?
ಮನಸು ಮುರಿದು ಮೌನ ಅವಿತು
ಹೃದಯ ಬಡಿತದಿಂ ಬೆವೆತು ,
ನಿಲ್ಲಲೋಲ್ಲೆಯೆಂದು ಕೂತು ಮತ್ತೆ ನಿಂತು ಮತ್ತೆ ಕೂತು
ಅಂತರಂಗದಳಲಿಗೆ ಸೋತೆ ನಾ ಸೋತು .
ಹೇಳಬೇಕೆಂಬುದೆನ್ ಹೇಳದೆ ,
ಅಳಿದು ಹೋಗದ ಭಾವಕೆ ಬಾಗಿ
ಮರೆವು ಎಂಬುದ ಮರೆತು ಯೋಚಿಸುವೆ
ನಾ ಕೆಡಲು ನಾನಾಗಿ ....
ಆಗ ತಪ್ಪು ಈಗದು ಸರಿ
ಮನದಂಗಳದಲಿ ಈ ಯೋಚನೆ ಬರಿ ...
ಇದೆಲ್ಲಾ ಬೇಡ ; 'ಏಕೆ ಹೀಗೆ ನಾನು '?
'ನಾನು ' ಎನಲು ಅರ್ಥವೇನು ?
ಅಯ್ಯೋ ಮತ್ತವೇ ಯೋಚನೆ ಬರಿ ... --Vikram B K
P.S. ಭಾವನೆಗಳು ನೂರಾರು.. ಪ್ರತಿಯೊಬ್ಬನ ಜೀವನದಲ್ಲಿ ದ್ವಂದ್ವ ಕಾಡುತ್ತದೆ, ನನ್ನ ದ್ವಂದ್ವವನ್ನು ಹಿಡಿದಿಡಲು ಪ್ರಯತ್ನಿಸಿದ್ದೇನೆ....
4 comments:
Nice man... good tht u opened a blog for ur poems... :)
Bk, Really nice kano that u started this blog :-)... All the best....
Thanks vivek and raghu....
ತುಂಬಾ ಚೆನ್ನಾಗಿದೆ ಗುರು... Keep it up
Post a Comment