"ಸ್ಥಿತಿ"


'ಸಮಯ' ಕಳೆಯುತಿರಲು  ,
 ಬದುಕಿನ  ಬಯಲಾಟ  .....
ಬದುಕಿರಲು, ಹಳೆ ನೆನಪುಗಳ  ಕಾಟ....

'ಮಾಯೆ' ಇರುವಳೊ - ಇರದವಳೊ ,
ಅರಿವಿಲ್ಲದೆ  ಪರದಾಟ ..
ಹಳೆತು- ಹೊಸತುಗಳ  ನಡುವೆ ,
ಕಳೆದು ಹೋದ  ಕಾಲ..

ಮನೆಯ ಕಟ್ಟಲೆಂದು ಹೊರಟೆ,
ಮನಸ್ಸ  ಕಟ್ಟಿಕೊಂಡೆ..
ನಂದನವನದಲಿ  ನಂಬಿಕೆಯ ಬೇಟೆ,
ಪ್ರೀತಿ-ಸಂತಸದ ಹೆಮ್ಮರ -ಎಲ್ಲಿವೆ ಗೋಡೆ!

ಕುಣಿದಾಟ- ಚೆಲ್ಲಾಟ- ನಿಶಬ್ದಗಳ ಆರ್ಭಟ..
ಅವಳಾಟ- ಅವನಾಟ - ಮಾಟ ....
ಭಾವನೆಗಳ  ಹೊಡೆದಾಟ...

- ವಿಕ್ರಮ್ ಬಿ ಕೆ
@vikrambk

0 comments:

Post a Comment