"ಸ್ಥಿತಿ"
'ಸಮಯ' ಕಳೆಯುತಿರಲು ,
ಬದುಕಿನ ಬಯಲಾಟ .....
ಬದುಕಿರಲು, ಹಳೆ ನೆನಪುಗಳ ಕಾಟ....
'ಮಾಯೆ' ಇರುವಳೊ - ಇರದವಳೊ ,
ಅರಿವಿಲ್ಲದೆ ಪರದಾಟ ..
ಹಳೆತು- ಹೊಸತುಗಳ ನಡುವೆ ,
ಕಳೆದು ಹೋದ ಕಾಲ..
ಮನೆಯ ಕಟ್ಟಲೆಂದು ಹೊರಟೆ,
ಮನಸ್ಸ ಕಟ್ಟಿಕೊಂಡೆ..
ನಂದನವನದಲಿ ನಂಬಿಕೆಯ ಬೇಟೆ,
ಪ್ರೀತಿ-ಸಂತಸದ ಹೆಮ್ಮರ -ಎಲ್ಲಿವೆ ಗೋಡೆ!
ಕುಣಿದಾಟ- ಚೆಲ್ಲಾಟ- ನಿಶಬ್ದಗಳ ಆರ್ಭಟ..
ಅವಳಾಟ- ಅವನಾಟ - ಮಾಟ ....
ಭಾವನೆಗಳ ಹೊಡೆದಾಟ...
- ವಿಕ್ರಮ್ ಬಿ ಕೆ
@vikrambk