ಮತ್ತದೇ ರಾಗ....

ಹಾಡಿನಲಿ ರಾಗ ನೀನೆ,
ಪದಗಳು ನೀನೆ,
ನನ್ನ ದನಿ; ಕೇಳಲಿಲ್ಲ ನಿನ್ನ ಕಿವಿ ಅಸ್ಟೆ...!

ನಿದ್ದೆಯಲಿ ಕನಸ್ಸು ನಿಂದೆ,

ಅ ನಗುವ ಮೊಗವು ನಿಂದೆ,
ಕಣ್ತೆರೆಯಲು; ಗಾಢ ನಿದ್ರೆಯ ಕತ್ತಲಸ್ಟೆ...!

ಉತ್ಸಾಹದಲಿ ಸ್ಪೂರ್ತಿ ನಿಂದೆ.
ನನ್ನೀ ಮೂರ್ತಿಯ ಕಳೆಯು ನಿಂದೆ,
ಭಾವ ಹಂಚಿದೊಡನೆ; ನಾ ಬರಿ ಕಲ್ಲು ಬಂಡಿಯಸ್ಟೆ...!

ಮೌನದಲ್ಲಿ ಅರ್ಭಟವಾಗದೆ
ದುಃಖದಲ್ಲಿ ಸಂತೋಷವತರದೆ ,
ದೂರ ಸರಿಯನುತಿರಲು; ಪ್ರೀತಿ ಮತ್ತೆ ಹುಟ್ಟಿತ್ತಸ್ಟೆ.... -- Vikram B K