ಒಂದು ಪ್ರಶ್ನೆ.....
ನೆನಪು ಮರೆತಾಗ ಮಾತ್ರ
ನೆನೆಯಲೋಲ್ಲೆಯಂದಿದ್ದೆ;
ಭಾವ ಬರಿ ಯಾತನೆ ಅಸ್ಟೆ,
ಸಿಹಿ ಹಂಚುವ ಕನಸ್ಸಾ ಬಿಚ್ಚಿಟ್ಟಿದ್ದೆ...,
ಇರಲು ಸನಿಹ ಇರದ ದೂರದ
ಚಿಂತೆ ನೀ ಬಿಂಬಿಸಲು,
ವಿರಹದ ಮುಳ್ಳು ಚುಚ್ಚಿತ್ತು ಎದೆಗೆ;
ಎದೆ ಇನ್ನೂ ಕಲ್ಲಾಗಲಿಲ್ಲ ಗೆಳೆಯ...,
ಒಲವಿರಲಿ, ಉದ್ವೇಗದಲೆಯಿರಲಿ;
ನಿನ್ನೆದೆಯಾಳದ ಮೃದು-ವ್ಯತೆಯಾಗಲಿ;
ಸ್ಪಂದಿಸುವ ಸ್ನೇಹ ಗೀತೆಯ ಪಲ್ಲವಿ ಗುನಗಿದ್ದೆ,
ಗೆಳೆಯ, ಎದೆಒಳಗೆ ಬರೀ ರುದ್ರತಾಂಡವವೀಗ....
ಮರೆತರೂ ನೆನಪಾಗಿ ಕಾಡುವೆ,
ಕಾಡಿದರೂ ತಿಳಿಯದ ಖುಷಿ ಕೊಡುವೆ..
ಈ ಖುಷಿ ಗ್ರಹಿಸಲು, ಒಂದು ಪ್ರಶ್ನೆ;
ನೀ ಇರಲು ಇರದಂತೆ ಏಕೆ ಇರುವೆ....? -- Vikram B K
P.S. ಒಂದು ಪ್ರಶ್ನೆ..... ಮನದೊಳಗೆ ಮೌನ ಆವರಿಸಿದಾಗ.....
ನೆನೆಯಲೋಲ್ಲೆಯಂದಿದ್ದೆ;
ಭಾವ ಬರಿ ಯಾತನೆ ಅಸ್ಟೆ,
ಸಿಹಿ ಹಂಚುವ ಕನಸ್ಸಾ ಬಿಚ್ಚಿಟ್ಟಿದ್ದೆ...,
ಇರಲು ಸನಿಹ ಇರದ ದೂರದ
ಚಿಂತೆ ನೀ ಬಿಂಬಿಸಲು,
ವಿರಹದ ಮುಳ್ಳು ಚುಚ್ಚಿತ್ತು ಎದೆಗೆ;
ಎದೆ ಇನ್ನೂ ಕಲ್ಲಾಗಲಿಲ್ಲ ಗೆಳೆಯ...,
ಒಲವಿರಲಿ, ಉದ್ವೇಗದಲೆಯಿರಲಿ;
ನಿನ್ನೆದೆಯಾಳದ ಮೃದು-ವ್ಯತೆಯಾಗಲಿ;
ಸ್ಪಂದಿಸುವ ಸ್ನೇಹ ಗೀತೆಯ ಪಲ್ಲವಿ ಗುನಗಿದ್ದೆ,
ಗೆಳೆಯ, ಎದೆಒಳಗೆ ಬರೀ ರುದ್ರತಾಂಡವವೀಗ....
ಮರೆತರೂ ನೆನಪಾಗಿ ಕಾಡುವೆ,
ಕಾಡಿದರೂ ತಿಳಿಯದ ಖುಷಿ ಕೊಡುವೆ..
ಈ ಖುಷಿ ಗ್ರಹಿಸಲು, ಒಂದು ಪ್ರಶ್ನೆ;
ನೀ ಇರಲು ಇರದಂತೆ ಏಕೆ ಇರುವೆ....? -- Vikram B K
P.S. ಒಂದು ಪ್ರಶ್ನೆ..... ಮನದೊಳಗೆ ಮೌನ ಆವರಿಸಿದಾಗ.....
ನಿರ್ಧಾರ
ಈ ಅಂಧನ ಕಣ್ಣಲ್ಲಿ ಬೆಳದಿಂಗಳ
ಬೆಳಕು ಅಮವಾಸ್ಸೆಗೆ ಬಂದು
ಮನವೆಂಬ ಚಂಚಲೆಯ
ಮಸಣದ ಕೋಣೆಯಲ್ ಕೂಡಿಟ್ಟಿದೆ.....
ಮದದಾನೆಯು ಮರು ಮಾತಾಡದೆ
ಮೌನದ ಪ್ರಶ್ನೆಗಳಿಗೆ ಮೌನದಿಂ ಉತ್ತರಿಸಿ,
ಹಯದಂತೆ ಓಡಿತು; ಗುರಿಯ ಬೆನ್ನೇರಿ
ತಾನು ಯಾರೆಂದು ತಾನೇ ಮರೆತು....
ಮಲಗಿದ್ದವನು ಎದ್ದುನಿಂತೆ
ಎದ್ದೇಳಿ ನೋಡಲು ಜೀವನ ಹುಚ್ಚರಸಂತೆ,
ನಿಲ್ಲಲೊಲ್ಲೆಯೆಂದು ಓಡಿದೆ ಓಡಿದೆ ಓಡಿದೆ
ಓಡುವುದು ಯಾಕೆಂಬುದನರಿಯದೆ.....
ಅಯ್ಯೋ ಅನಲು "ಆರವರಯ್ಯ" ?
ಎಂಬ ಸಾಂತ್ವನವು ಸಿಗದಿರಲು,
ಸ್ವಾತಂತ್ರದಿಂ ಮೆರೆದು ಜ್ಞಾನವಾಳಿದ ನಿರ್ಧಾರಕ್ಕೆ
ಕಣ್ಣಿರಲು ಅಂಧನಾದೆನಾ ಎಂಬ ಪ್ರಶ್ನೆ...!
ನೆಡೆದು ಬಂದ ದಾರಿಯ ತುಂಬ
ಹೇಗೆ ನೆಡೆವುದೆಂಬ ಚಿಂತೆ;
ಅರಿತ ಅನುಭವದ ಬಿಂಬ
ಬೇಕೆನ್ನುವುದು ಹಳೇ ಜೀವನ ಮತ್ತೆ.... -- Vikram B K
P.S. ನಿರ್ಧಾರ...ಜೀವನದ ಪ್ರಮುಖ ಹೆಜ್ಜೆ ಅಂದ್ರೆ ತಪ್ಪಲ್ಲ ಅನಿಸುತ್ತೆ... ಏನಂತೀರ...?
ಬೆಳಕು ಅಮವಾಸ್ಸೆಗೆ ಬಂದು
ಮನವೆಂಬ ಚಂಚಲೆಯ
ಮಸಣದ ಕೋಣೆಯಲ್ ಕೂಡಿಟ್ಟಿದೆ.....
ಮದದಾನೆಯು ಮರು ಮಾತಾಡದೆ
ಮೌನದ ಪ್ರಶ್ನೆಗಳಿಗೆ ಮೌನದಿಂ ಉತ್ತರಿಸಿ,
ಹಯದಂತೆ ಓಡಿತು; ಗುರಿಯ ಬೆನ್ನೇರಿ
ತಾನು ಯಾರೆಂದು ತಾನೇ ಮರೆತು....
ಮಲಗಿದ್ದವನು ಎದ್ದುನಿಂತೆ
ಎದ್ದೇಳಿ ನೋಡಲು ಜೀವನ ಹುಚ್ಚರಸಂತೆ,
ನಿಲ್ಲಲೊಲ್ಲೆಯೆಂದು ಓಡಿದೆ ಓಡಿದೆ ಓಡಿದೆ
ಓಡುವುದು ಯಾಕೆಂಬುದನರಿಯದೆ.....
ಅಯ್ಯೋ ಅನಲು "ಆರವರಯ್ಯ" ?
ಎಂಬ ಸಾಂತ್ವನವು ಸಿಗದಿರಲು,
ಸ್ವಾತಂತ್ರದಿಂ ಮೆರೆದು ಜ್ಞಾನವಾಳಿದ ನಿರ್ಧಾರಕ್ಕೆ
ಕಣ್ಣಿರಲು ಅಂಧನಾದೆನಾ ಎಂಬ ಪ್ರಶ್ನೆ...!
ನೆಡೆದು ಬಂದ ದಾರಿಯ ತುಂಬ
ಹೇಗೆ ನೆಡೆವುದೆಂಬ ಚಿಂತೆ;
ಅರಿತ ಅನುಭವದ ಬಿಂಬ
ಬೇಕೆನ್ನುವುದು ಹಳೇ ಜೀವನ ಮತ್ತೆ.... -- Vikram B K
P.S. ನಿರ್ಧಾರ...ಜೀವನದ ಪ್ರಮುಖ ಹೆಜ್ಜೆ ಅಂದ್ರೆ ತಪ್ಪಲ್ಲ ಅನಿಸುತ್ತೆ... ಏನಂತೀರ...?